ಕರಾರು ಟಿಪ್ಪಣಿ : ಒಬ್ಬ ಷೇರು ದಲ್ಲಾಳಿ ತನ್ನ ಕಕ್ಷಿಗಾರನ ಲೆಕ್ಕದಲ್ಲಿ ಕೊಂಡ ಅಥವಾ ಮಾರಿದ ಷೇರುಗಳ ವಿವರಗಳನ್ನು ನೀಡಿ ಆತನಿಗೆ ಸಲ್ಲಿಸುವ ಪತ್ರ. ಮುಂಬೈ ಮತ್ತು ಕೋಲ್ಕತ್ತ ಷೇರುಪೇಟೆಯ ಒಂದು ಮಾದರಿ ಕರಾರು ಟಿಪ್ಪಣಿಯಲ್ಲಿ ಈ ವಿವರಗಳಿರುತ್ತವೆ: ಷೇರುಗಳ 

ಬೆಲೆ; ಷೇರು ವರ್ಗಾವಣೆಯನ್ನು ಕಾನೂನುಬದ್ಧವಾಗಿ ಮಾಡಲು ಅಗತ್ಯವಾದ ಸರ್ಕಾರಿ ಮುದ್ರಾಂಕ (ಸ್ಟಾಂಪ್) ಶುಲ್ಕ; ವರ್ಗಾವಣೆಯನ್ನು ದಾಖಲು ಮಾಡಿಕೊಳ್ಳಲೂ ಹೊಸ ಷೇರುಪ್ರಮಾಣ ಪತ್ರವನ್ನು ನೀಡಲೂ ಕಂಪನಿ ವಿಧಿಸುವ ಶುಲ್ಕ; ಮತ್ತು ಷೇರು ದಲ್ಲಾಳಿ ವಿಧಿಸುವ 

ದಲ್ಲಾಳಿ ಶುಲ್ಕ. ಷೇರುಗಳ ಮೊಬಲಗನ್ನು ಪಾವತಿ ಮಾಡಬೇಕಾದ ಲೆಕ್ಕ ಚುಕ್ತಾದಿನವನ್ನೂ ಇದರಲ್ಲಿ ಸೂಚಿಸಿರುತ್ತದೆ.   (ಕೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ